ತರಕರಡಿಯ ನಿಶೆ ವಿಹಾರ

ಗೂಢ, ನಿಶಾಚರಿಯೆನ್ನಲಾದ, ಹೆಚ್ಚಾಗಿ ಒಣ ಆವಾಸನೆಲೆಗಳಲ್ಲಿ ಕಂಡುಬರುವ ತರಕರಡಿ – ರಾಟೆಲ್, (ಮೆಲ್ಲಿವೋರ ಕೆಪೆನ್‌ಸಿಸ್),  ‘ಮಸ್ಟೆಲಿಡೇ’ (Mustelidae) ಕುಟುಂಬವರ್ಗಕ್ಕೆ ಸೇರಿದ ಸಣ್ಣ ಮಾಂಸಾಹಾರಿ ಪ್ರಾಣಿ. ವಿವಿಧ ರೀತಿಯ ಕ್ರಿಮಿಗಳು, ಗೊರಸು ಪ್ರಾಣಿಗಳ ಮರಿಗಳು, ಪಕ್ಷಿಗಳು ಮತ್ತು ವಿಷಯುಕ್ತ ಹಾವುಗಳನ್ನೂ ತಿನ್ನುವ ತರಕರಡಿ, ಇತರ ಪ್ರಾಣಿಗಳು ಕೊಂದ ಪ್ರಾಣಿಗಳ ಶವಭಕ್ಷಣೆಯನ್ನೂ ಮಾಡುತ್ತವೆಯೆಂದು ದಾಖಲಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ರ ಶೆಡ್ಯೂಲ್ ೧ರ ಪಟ್ಟಿಯಲ್ಲಿರುವ ತರಕರಡಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಛಾಯಾಚಿತ್ರದಲ್ಲಿ ದಾಖಲಾಗಿದೆ. ಕಾವೇರಿ ವನ್ಯಜೀವಿಧಾಮದಲ್ಲಿ ಚಿರತೆ ಸಾಂದ್ರತೆಯನ್ನು […]